ಜೀವನವೇ ಒಂದು ಸೈಕಲ್ ಇದ್ದಂತೆ

ತುಳ್ಕೊಂಡು ತಳ್ಕೊಂಡು, ನಡೀಬೇಕು ಮುಂದೆ.

ಪಂಕ್ಚರ್ ಆಯ್ತಂತಾ ಕುಂತ್ಬಿಟ್ರೆ ಹೆಂಗೆ?

ತಡ್ಕೊಂಡು ತಿದ್ಕೊಂಡು ಹೋಗ್ಬೇಕು ಮುಂದೆ!

ನೀನ್ ಇಲ್ದೆ ಇದ್ರುನು ನಡೆಯುತ್ತೆ ಭೂಮಿ,

ಅಂದ್ಮೇಲೆ ಯಾಕಿಷ್ಟು ಟೆನ್ಶನ್ ಸ್ವಾಮಿ?

ಎಕ್ಸ್ ಪೈರಿ ಡೇಟ್ ಅಂತ ಮಾಡ್ಗಾವ್ನೆ ದ್ಯಾವ್ರು,

ಅಲ್ಗಂಟ ಎಳಿಬೇಕು ಜೀವದ ತೇರು!

ಅಲ್ಲಲ್ಲಿ ಬೀಳೋದು ತೀರ ಮಾಮುಲು,

ಬಿದ್ದಾಗ ತುಳಿಯೋರೆ ಸುತ ಎಲ್ಲರೂ.

ನಿಂಗಂತ ಯಾರಿಲ್ಲ ನೀನೆ ಎಲ್ಲನು,

ಉಳಿಪೆಟ್ಟು ಬಿದ್ಮೇಲೆ ಹರಡೋಡು ಚಿಗುರು.

ಜೀವ್ನನೆ ಒಂದು ಸೈಕಲ್ ಇದ್ದಂಗೆ,

ತುಳ್ಕೊಂಡು ತಳ್ಕೊಂಡು, ನಡೀಬೇಕು ಮುಂದೆ.

ಹುಟ್ಟಿದಾಗ ಏನನ್ನು ತರಲಿಲ್ಲ ತಾನೆ?

ಸತ್ಮೆಲೆ ಅಂತು ಯಾವ್ದು ನಿಂದಲ್ಲಾ ತಾನೆ?

ಹುಟ್ಟು ಸವಿನ್ ನಡೆಯುವೆ ಜೀವ,

ಜೀವ್ಸಿ ಕಟ್ಬೇಕು ಗಂಟು ಮೂಟೆನ.

ದ್ವೇಷ ಅಸುಯೇ ಚಿಂತೆ ಮೌನಾ

ಎಲ್ಲ ಸೇರಲೇಬೇಕು ಕೊನೆಗೆ ಮಣ್ಣ.

ಗಡಿಯಾರ ಹೊಡುತೈತೋ ಅಣ್ಣ,

ಸುಮ್ನೆ ಕೊರಗುತ್ತಾ ಕಳಿಬೇಡ ಟೈಮ್ ನಾ.

ಗಡಿಯಾರ ಹೊಡುತೈತೋ ಅಣ್ಣಾ,

ಸುಮ್ನೆ ಕೊರಗುತ್ತಾ ಕಳಿಬೇಡ ಟೈಮ್ ನಾ.

ಜೀವ್ನನೆ ಒಂದು ಸೈಕಲ್ ಇದ್ದಂಗೆ,

ತುಳ್ಕೊಂಡು ತಳ್ಕೊಂಡು, ನಡೀಬೇಕು ಮುಂದೆ.

ಪಂಕ್ಚರ್ ಆಯ್ತಂತಾ ಕುಂತ್ಬಿಟ್ರೆ ಹೆಂಗೆ?

ತಡ್ಕೊಂಡು ತಿದ್ಕೊಂಡು ಹೋಗ್ಬೇಕು ಮುಂದೆ!

ತಿನ್ನಕ್ಕೆ ಮೂರ್ ಹೊತ್ತು ಕೂಳ್ ಐತೆ ತಾನೇ?

ಬಡ್ಗೆದೋ ಸ್ವಂತದೋ ಸೂರ್ ಐತೆ ತಾನೆ?

ಶೋಕಿಗೆ ಮೈ ತುಂಬ ಸಾಲ,

ಮಾಡಿ ಉಪವಾಸ ಮಲಗೋದ್ ಒಂದ್ ಬಾಳ?

ಆಸೆಯೇ ದುಃಖಕ್ಕೆ ಮೂಲ,

ಅರಿತು ಬಾಳೋಣ ಜೀವನಾನೆ ಸರಳಾ.

ಕಣ್ಣ ತುಂಬ ಮಲಗೊನೆ ರಿಚ್ಚು,

ದುಡ್ಡು ದುದಿದಷ್ಟು ಹೆಚ್ಚುತೆ ಹುಚ್ಚು.

ಕಣ್ಣ ತುಂಬ ಮಲಗೊನೆ ರಿಚ್ಚು,

ದುಡ್ಡು ದುದಿದಷ್ಟು ಹೆಚ್ಚುತೆ ಹುಚ್ಚು.

ಜೀವ್ನನೆ ಒಂದು ಸೈಕಲ್ ಇದ್ದಂಗೆ,

ತುಳ್ಕೊಂಡು ತಳ್ಕೊಂಡು, ನಡೀಬೇಕು ಮುಂದೆ.

ಪಂಕ್ಚರ್ ಆಯ್ತಂತಾ ಕುಂತ್ಬಿಟ್ರೆ ಹೆಂಗೆ?

ತಡ್ಕೊಂಡು ತಿದ್ಕೊಂಡು ಹೋಗ್ಬೇಕು ಮುಂದೆ

ನೋಡಿದೋರ್ ಏನ್ ಅಂತಾರೆ ಅನ್ನೋದ ಬಿಟ್ಟು,

ಮನ್ಸಿಗೆ ಅನ್ಸಿದುನ್ ಮಾಡು ನೀ ಫಸ್ಟ್-u.

ನಿನ್ನ್ ಲೈಫ್ ನಿನ್ನ ಹತ್ರ ಇರಬೇಕು ಜುಟ್ಟು,

ಕಂಡ್ ಕಂಡೋರ್ ಕೈಗ್ ಕೊಟ್ರೆ ಎಸಿತಾರೆ ಸುಟ್ಟು!

ಅಲ್ಲಲ್ಲಿ ಬೀಳೋದು ತೀರ ಮಾಮುಲು,

ಬಿದ್ದಾಗ ತುಳಿಯೋರೆ ಸುತ್ತ ಎಲ್ಲಾರೂ.

ನಿಂಗಂತ ಯಾರಿಲ್ಲ ನೀನೆ ಎಲ್ಲಾನೂ,

ಉಪ್ಪಿಪೆಟ್ಟು ಬಿದ್ದಮೇಲೆ ಹರಡೋದು ಚಿಗುರು.

ಜೀವ್ನನೆ ಒಂದು ಬೋಗಿ ಇದ್ದಂಗೆ,

ಇಳಿತಾರೆ ಬುಟ್ಬುಟು ಸ್ಟೇಷನ್ ಬಂದಂಗೆ,

ಇಳಿತಾರೆ ಬುಟ್ಬುಟು ಸ್ಟೇಷನ್ ಬಂದಂಗೆ,

ಒಂಟು ಹೋದವರ ಚಿಂತೆಲೆ, ಒಂಟಿ ಆಗೊದ್ರೆ

ನಿನ್ನನೇ ನಂಬ್ದೋರ್ಗೆ ಆಗಲ್ವಾ ತೊಂದರೆ,

ನಿನ್ನನೇ ನಂಬ್ದೋರ್ಗೆ ಆಗಲ್ವಾ ತೊಂದರೆ